ಸಿರಿಧಾನ್ಯ ಓಟ
ಸಿರಿಧಾನ್ಯ ಓಟ 19 ಜನವರಿ 2025 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ನಡೆಸಲಾಯಿತು.
No. 1, Sheshadri Road, Bangalore, Karnataka-560001
Call us: 080-22074111
Mail Support: organicsandmillets@gmail.com
Mon - Sat: 10.00am - 5.30pm
ITF 2025 ರ ನೋಟ
ರಾಜ್ಯದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳನ್ನು ಉತ್ತೇಜಿಸಲು ವಿವಿಧ ಉತ್ತೇಜನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದ್ದು, 2017ನೇ ಸಾಲಿನಿಂದ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳಗಳನ್ನು ಆಯೋಜಿಸಿ ಬೆಂಗಳೂರು ನಗರವನ್ನು ಸಿರಿಧಾನ್ಯಗಳ ಜಾಗತಿಕ ಕೇಂದ್ರವಾಗಿ ತರಲು ಶ್ರಮಿಸಲಾಗುತ್ತಿದೆ. ಈ ಪ್ರಯತ್ನಗಳ ಕಾರಣದಿಂದಾಗಿ, ತಲೆಮಾರುಗಳಿಂದಲೂ ಬೆಳೆದ ಸಿರಿಧಾನ್ಯ, ಸಾವಯವ ಮತ್ತು ಸಾಂಪ್ರದಾಯಿಕ ಆಹಾರ ಉತ್ಪನ್ನಗಳು ಜನರ ಆದ್ಯತೆಯ ಆಹಾರವಾಗಿ ಹೊರಹೊಮ್ಮುತ್ತಿವೆ.
ಸಿರಿಧಾನ್ಯಗಳಿಗೆ ಹೆಚ್ಚಿನ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳಿಗೆ ಜಾಗತಿಕ ಜಾಗೃತಿ ಮತ್ತು ಮಾರುಕಟ್ಟೆ ಸಂಪರ್ಕಕ್ಕಾಗಿ ಆರನೇ ಆವೃತ್ತಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025 ಅನ್ನು ಜನವರಿ 23-25, 2025 ರಂದು ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು ಇಲ್ಲಿ ಆಯೋಜಿಸಲಾಗುತ್ತಿದೆ. ರಾಜ್ಯದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳಿಗಿರುವ ಅವಕಾಶಗಳು ಮತ್ತು ರಫ್ತು ಸಾಮರ್ಥ್ಯವನ್ನು ಪ್ರದರ್ಶಿಸುವುದು, ಜಾಗತಿಕ ಮತ್ತು ದೇಶೀಯ ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸುವುದು, ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉತ್ತಮ ಅವಕಾಶವನ್ನು ಕಲ್ಪಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ.
ಸಾವಯವ ಮತ್ತು ಸಿರಿಧಾನ್ಯ ವಲಯಗಳಲ್ಲಿನ ಎಲ್ಲಾ ಪಾಲುದಾರರಿಗೆ ಅನುಕೂಲಕರವಾದ ಪರಿಣಿತಿ, ಜ್ಞಾನ ಮತ್ತು ವ್ಯಾಪಾರ ಪದ್ದತಿಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ. ಈ ಮೂಲಕ ಎಲ್ಲಾ ಪಾಲುದಾರರ ಸಾಮರ್ಥ್ಯ ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಲು ಹಾಗೂ ವ್ಯಾಪಾರದ ಅವಶ್ಯಕತೆಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ
ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ-೨೦೨೫ ಮುಖ್ಯಾಂಶಗಳು
ಪೂರ್ವಭಾವಿ ಕಾರ್ಯಕ್ರಮ
ಸಾವಯವದೆಡೆ
ಸಿರಿಧಾನ್ಯದೆಡೆ
ಪ್ರದರ್ಶಕರು
ಭಾಷಣಕಾರರು
ಬಿ2ಬಿ ಸಭೆೆ
ಅವಧಿಗಳು
ಆಹಾರ ಮಳಿಗೆಗಳು
ಪ್ರಚಾರ ಕಾರ್ಯಕ್ರಮಗಳು
ಸಾವಯವ & ಸಿರಿಧಾನ್ಯ